ಜಂಬೆ
 	ಲೆಗ್ಯೂಮಿನೋಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ದ.ಕನ್ನಡ ಜಿಲ್ಲೆಗಳ ತೇವಪೂರಿತ ಪರ್ಣಪಾತಿ  ಮರಗಳ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಆಂಧ್ರಪ್ರದೇಶ, ಕೇರಳಗಳ ಕೆಲವು ಪ್ರದೇಶಗಳಲ್ಲೂ ಉಂಟು. ಕ್ಸೆöÊಲಿಯ ಕ್ಸೆöÊಲೋಕಾರ್ಪ ಇದರ ಶಾಸ್ತಿçÃಯ ಹೆರು. ಸುಮಾರು ೧೦-೩೦ ಮೀ. ಎತ್ತರಕ್ಕೆ ಬೆಳೆಯುವ ಪರ್ಣಪಾತಿ ಮರ ಇದು. ಇದರ ತೊಗಟೆಯ ಬಣ್ಣ ಕೆಂಪು ಮಿಶ್ರಿತ ಬೂದು. ಚೌಬೀನೆ ಬಲು ಭಾರವೂ ಗಟ್ಟಿಯೂ ಆಗಿದೆ. ಇದರ ಬಣ್ಣ ಕೆಂಪುಮಿಶ್ರಿತ ಕಂದು, ಎಲೆಗಳು ದ್ವಿಪಿಚಕ ಸಂಯುಕ್ತ ಮಾದರಿಯವು. ಎಲೆಗಳ ಬುಡದಲ್ಲಿ ಸಣ್ಣ ಗಾತ್ರದ ವೃಂತಪರ್ಣಗಳಿವೆ. ಹೂಗಳು ಬಿಳಿ, ಸಣ್ಣ ಗಾತ್ರದವು ; ಎಲೆಗಳ ಕಂಕುಳಲ್ಲಿ ಮೂಡುವ ಗುಂಡನೆಯ ಚಂಡುಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳು, ದಳಗಳು ಐದೈದು. ಕೇಸರುಗಳು ೧೦; ಬಿಡಿಬಿಡಿಯಾಗಿವೆ. ಅಂಡಾಶಯ ಉಚ್ಚಸ್ಥಾನದ್ದು ; ಒಂದೇ ಕಾರ್ಪೆಲಿನಿಂದ ಉಂಟಾಗಿದೆ. ಫಲ ಪಾಡ್ ಮಾದರಿಯದು. ಇದರ ಉದ್ದ ೧೦-೧೫ ಸೆಂ.ಮೀ.; ಅಗಲ ೫-೬ ಸೆಂ.ಮೀ. ಇದು ದಾರುಮಯ ಹಾಗೂ ಚಪ್ಪಟೆ ಆಗಿದೆ.
	
ಜಂಬೆ ಬಹಳ ದೃಢಕಾಯದ ಮರ. ಕಾಳ್ಗಿಚ್ಚಿಗೆ ಸುಲಭವಾಗಿ ಬಲಿಯಾಗದು. ಇದನ್ನು ಹದಗೊಳಿಸುವುದು ಮತ್ತು ಕೊಯ್ಯುವುದು ಬಹಳ ಕಷ್ಟ. ಸರಿಯಾಗಿ ಹದ ಮಾಡದಿದ್ದರೆ ಇದರ ಮೇಲ್ಮೆöÊಯಲ್ಲಿ ಬಿರುಕುಗಳುಂಟಾಗುತ್ತವೆ. ಅಲ್ಲದೆ ಚೌಬೀನೆ ಡೊಂಕಾಗುವುದೂ ಉಂಟು. ಆದ್ದರಿಂದ ಇದನ್ನು ಮಳೆಗಾಲದಲ್ಲೆÃ ಬೀಳಿಸಿ ಹಸಿ ಆರುವ ಮುನ್ನ ಕೊಯ್ದು, ನೆರಳಿನಲ್ಲಿ ನಿಧಾನವಾಗಿ ಆರಲು ಬಿಡುವುದಿದೆ. ಹೀಗೆ ಮಾಡಿದರೆ ಹೆಚ್ಚು ಕಾಲ ಬಾಳುತ್ತದೆ. ಇದನ್ನು ಗಣಿಗಳಲ್ಲಿನ ಆಸರೆಗಂಬ, ರೈಲ್ವೆ ಸ್ಲಿÃಪರುಗಳು, ತೊಲೆ, ರೈಲ್ವೆ ವ್ಯಾಗನುಗಳ ನೆಲಕ್ಕೆ ಹಾಸುವ ಹಲಗೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜಂಬೆಗೆ ಔಷಧೀಯ ಪ್ರಾಮುಖ್ಯವೂ ಉಂಟು. ಇದರ ತೊಗಟೆಯಿಂದ ತಯಾರಿಸಲಾಗುವ ಕಷಾಯವನ್ನು ಜಂತುನಾಶಕವಾಗಿಯೂ, ಕುಷ್ಠ, ಅತಿಸಾರ, ಗಾನರೀಯ ಮುಂತಾದ ರೋಗ ನಿವಾರಣೆಗೂ ಬಳಸುತ್ತಾರೆ. ಇದರ ಬೀಜದಿಂದ ಪಡೆಯುವ ಎಣ್ಣೆಗೆ ಸಂಧಿವಾತ, ಮೂಲವ್ಯಾಧಿಗಳನ್ನು ವಾಸಿ ಮಾಡುವ ಗುಣ ಇದೆ.
( ಎ.ಕೆ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ